ಚಿಟ್ಟಾಣಿ ರಾಮಚಂದ್ರ ಹೆಗಡೆ (೧೯೩೩ ಜನವರಿ ೧ - ೨೦೧೭ ಅಕ್ಟೋಬರ್ ೦೩) ಯಕ್ಷಗಾನ ಕಲಾವಿದರಾಗಿದ್ದರು. ಯಕ್ಷಗಾನಕ್ಕೆ ಅವರು ನೀಡಿದ ಕೊಡುಗೆಗೆ ಭಾರತ ಸರಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ. == ಬಾಲ್ಯ ಮತ್ತು ಜೀವನ == ಜನವರಿ ೧, ೧೯೩೩ರಲ್ಲಿ ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಚಿಟ್ಟಾಣಿಯಲ್ಲಿ ಜನಿಸಿದ್ದ ಅವರು, ೨ನೇ ತರಗತಿಗೆ ಶಾಲೆ ಬಿಟ್ಟು, ೭ನೇ ವರ್ಷದಲ್ಲಿಯೇ ಯಕ್ಷಗಾನ ರಂಗ ಪ್ರವೇಶಿಸಿದ್ದರು. ಬಡಗುತಿಟ್ಟಿನ ಶೈಲಿಯ ಪಾತ್ರಗಳನ್ನು ಹೆಚ್ಚಾಗಿ ನಿರ್ವಹಿಸುತ್ತಿದ್ದರು. ೧೪ ವರ್ಷಕ್ಕೆ ಯಕ್ಷಗಾನದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡರು. == ನಿರ್ವಹಿಸಿದ ಪಾತ್ರಗಳು == ಕೌರವ, ದುಷ್ಟಬುದ್ಧಿ, ಭಸ್ಮಾಸುರ ಸೇರಿದಂತೆ ವಿವಿಧ ಪ್ರಮುಖ ಪಾತ್ರಗಳಲ್ಲಿ, ಅದರಲ್ಲಿಯೂ ಖಳನಾಯಕನ ಪಾತ್ರದಲ್ಲಿ ನಟಿಸಿದ್ದಾರೆ. ವಿಶಿಷ್ಟ ನರ್ತನ, ಲಯಗಾರಿಕೆ, ಅಭಿನಯ ಕೌಶಲಗಳಿಂದ ಅವರು ಪರಿಚಿತರಾಗಿದ್ದರು. ಬಾಳೆಗದ್ದೆ ರಾಮಕೃಷ್ಣ ಭಟ್ಟರ ಶಿಷ್ಯರಾಗಿದ್ದ ಇವರು, ಭಟ್ಟರ ನಿರ್ದೇಶನದಲ್ಲಿ 'ಕೃಷ್ಣ ಪಾರಿಜಾತ' ಪ್ರಸಂಗಕ್ಕೆ ಅಗ್ನಿಪಾತ್ರ ಮಾಡಿದ ಬಳಿಕ ಯಕ್ಷಗಾನದಲ್ಲಿ ಪರಿಚಿತರಾಗಿದ್ದರು. == ಪ್ರಶಸ್ತಿ-ಪುರಸ್ಕಾರಗಳು == 1991 – ರಾಜ್ಯೋತ್ಸವ ಪ್ರಶಸ್ತಿ 2004 – ಜನಪದಶ್ರೀ 2009 – ಕಾರ್ಕಿ ವೆಂಕಟರಮಣ ಶಾಸ್ತ್ರಿ ಪ್ರಶಸ್ತಿ 2009 – ಶಿವರಾಮ ಕಾರಂತ ಪ್ರಶಸ್ತಿ 2012 – ಪದ್ಮಶ್ರೀ 2012 – ಆಳ್ವಾಸ್ ನುಡಿಸಿರಿ ಪ್ರಶಸ್ತಿ 2013 – ಕೆರೆಮನೆ ಶಿವರಾಮ ಹೆಗಡೆ ಪ್ರಶಸ್ತಿ == ನಿಧನ == ೮೪ನೆ ವಯಸ್ಸಿನಲ್ಲಿ ನಿಧನರಾದರು. == ಇವನ್ನೂ ನೋಡಿ == ಕೆರೆಮನೆ ಶಿವರಾಮ ಹೆಗಡೆ ಕೆರೆಮನೆ ಶಂಭು ಹೆಗಡೆ ಕೆರೆಮನೆ ಮಹಾಬಲ ಹೆಗಡೆ ಯಕ್ಷಗಾನ == ಉಲ್ಲೇಖಗಳು == == ಚಿತ್ರಶಾಲೆ ==